ಕುಸಿದ ಡಯಾಲಿಸಿಸ್ ಘಟಕದ ಸೀಲಿಂಗ್: ರೋಗಿಗಳಿಗೆ ಗಾಯ
ಹೊಸದಿಲ್ಲಿ, ಮಾ.15: ಡಯಾಲಿಸಿಸ್ ಘಟಕದ ಸೀಲಿಂಗ್ ಕುಸಿದ ಪರಿಣಾಮ ಇಬ್ಬರು ರೋಗಿಗಳು ಗಾಯಗೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ.
ಇಲ್ಲಿನ ಕೆಇಎಂ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರೋಗಿಗಳಿಗೆ ಸಣ್ಣ ಗಾಯಗಳಾಗಿವೆ ಎಂದು ಆಸ್ಪತ್ರೆಯ ಡೀನ್ ಡಾ.ಅವಿನಾಶ್ ಸುಪೆ ಹೇಳಿದ್ದಾರೆ.
ಘಟನೆಯ ನಂತರ ಡಯಾಲಿಸಿಸ್ ಘಟಕವನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗಿದೆ. “ಬೇರೆ ಕಡೆ ಡಯಾಲಿಸಿಸ್ ಸೇವೆ ಲಭ್ಯವಿದೆ. ಮುಂದಿನ 3-4 ದಿನಗಳಲ್ಲಿ ಸೀಲಿಂಗನ್ನು ಮರುಜೋಡಿಸಲಾಗುವುದು” ಎಂದು ವೈದ್ಯರು ಹೇಳಿದ್ದಾರೆ.
Next Story