ಬ್ಯಾಂಕ್ಗಳಿಗೆ ವಂಚನೆ: ಡಿಪಿಐಎಲ್ನ 1,122 ಕೋ. ರೂ. ಸೊತ್ತು ಮುಟ್ಟುಗೋಲು
ಶ್ರೀನಗರ, ಎ. 23: ಹನ್ನೊಂದು ಬ್ಯಾಂಕ್ಗಳಿಗೆ 2,654 ಕೋ. ರೂ. ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ವಡೋದರಾ ಮೂಲದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಹಾಗೂ ಅದರ ನಿರ್ದೇಶಕರಿಗೆ ಸೇರಿದ 1,122 ಕೋ. ರೂ. ಮೊತ್ತ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ‘‘ಕಂಪೆನಿ ಹಾಗೂ ಅದರ ನಿರ್ದೇಶಕರಿಗೆ ಸೇರಿದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.’’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Next Story