ಪುತ್ರನ ವಿವಾಹ: ಲಾಲೂಪ್ರಸಾದ್ಗೆ 3 ದಿನ ಪರೋಲ್ ಮಂಜೂರು
ಪಾಟ್ನ, ಮೇ 10: ಆರ್ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ಗೆ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು ಮೂರು ದಿನಗಳ ಪರೋಲ್ ಮಂಜೂರು ಮಾಡಲಾಗಿದೆ ಎಂದು ಕಾರಾಗೃಹ ಮಹಾನಿರ್ದೇಶಕ ಹರ್ಷ ಮಂಗಲ್ ತಿಳಿಸಿದ್ದಾರೆ.
ಲಾಲೂಪ್ರಸಾದ್ ಅವರ ಹಿರಿಯ ಪುತ್ರ, ಬಿಹಾರದ ಮಾಜಿ ಸಚಿವ ತೇಜ್ಪ್ರತಾಪ್ ಯಾದವ್ ವಿವಾಹವು ಆರ್ಜೆಡಿ ಶಾಸಕ ಚಂದ್ರಿಕಾ ರಾಯ್ ಅವರ ಪುತ್ರಿಯೊಂದಿಗೆ ಪಾಟ್ನದಲ್ಲಿ ಮೇ 12ರಂದು ನಡೆಯಲಿದೆ. ಲಾಲೂಪ್ರಸಾದ್ ಯಾದವ್ರನ್ನು ಜೈಲಿನಿಂದ ಬಿಡುಗಡೆಗೊಳಿಸಿದ ದಿನದಿಂದ ಮೂರು ದಿನಗಳಾವಧಿಗೆ ಪರೋಲ್ ಅನ್ವಯಿಸುತ್ತದೆ ಎಂದು ಬಂಧೀಖಾನೆ ಕಾರಾಗೃಹ ಮಹಾನಿರ್ದೇಶಕರು ತಿಳಿಸಿದ್ದಾರೆ.
Next Story