ಪಾಕ್ ಸೇನೆಯಿಂದ ಗುಂಡು: ಯುವಕ ಮೃತ್ಯು
ಸಾಂದರ್ಭಿಕ ಚಿತ್ರ
ಜಮ್ಮುಕಾಶ್ಮೀರ, ಮೇ 11: ಪೂಂಛ್ ಗಡಿನಿಯಂತ್ರಣ ರೇಖೆಗುಂಟ ಪಾಕಿಸ್ತಾನ ಸೇನಾ ಪಡೆ ಗುರುವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ನಾಗರಿಕ ಮೃತಪಟ್ಟಿದ್ದಾನೆ. ಮೃತಪಟ್ಟವರನ್ನು ಕಾಲ್ಸಿಯಾನ್ ಗ್ರಾಮದ ನಿವಾಸಿ ಮುಹಮ್ಮದ್ ಇಕ್ಲಾಕ್ (22) ಎಂದು ಗುರುತಿಸಲಾಗಿದೆ.
‘‘ಪೂಂಛ್ ಜಿಲ್ಲೆಯ ಗಡಿನಿಯಂತ್ರಣ ರೇಖೆಗುಂಟ ಮಾಲ್ಟಿ-ಗುಲ್ಪುರ್ ಪ್ರದೇಶದ ಕಾಲ್ಸಿಯನ್ ಗ್ರಾಮದ ಮೇಲೆ ಪಾಕಿಸ್ತಾನ ಸೇನೆ ರಾತ್ರಿ 11.30ರ ಹೊತ್ತಿಗೆ ಗುಂಡು ಹಾರಿಸಿತು. ಗುಂಡು ತಗುಲಿ ನಾಗರಿಕನೋರ್ವ ಮೃತಪಟ್ಟಿದ್ದಾನೆ’’ ಎಂದು ಪೂಂಛ್ ನಿಯಂತ್ರಣ ಕೊಠಡಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story