ಪುಲ್ವಾಮ: ಮಸೀದಿಯ ಇಮಾಮ್ ಮೇಲೆ ಉಗ್ರರಿಂದ ಗುಂಡಿನ ದಾಳಿ
ಪುಲ್ವಾಮ, ಜು.6: ಮಸೀದಿಯೊಂದರ ಇಮಾಮ್ ಒಬ್ಬರಿಗೆ ಉಗ್ರಗಾಮಿಗಳ ತಂಡವೊಂದು ಗುಂಡಿಕ್ಕಿರುವ ಘಟನೆ ಪುಲ್ವಾಮದ ಪರಿಗಾಮ್ ನಲ್ಲಿ ನಡೆದಿದೆ.
ಬುಲೆಟ್ ಗಳಿಂದ ಗಂಭೀರವಾಗಿ ಗಾಯಗೊಂಡಿರುವ ಹನ್ಫಿಯಾ ಮಸೀದಿಯ ಇಮಾಮ್ ಮುಹಮ್ಮದ್ ಅಶ್ರಫ್ ಥೋಕರ್ ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಶೊಪಿಯಾನ್ ಜಿಲ್ಲೆಯಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪೇದೆ ಜಾವೈದ್ ಅಹ್ಮದ್ ದಾರ್ ಅವರ ಮೃತದೇಹ ಇಂದು ಪತ್ತೆಯಾಗಿತ್ತು.
Next Story