110 ಅಡಿ ಆಳದ ತೆರೆದ ಕೊಳವೆಬಾವಿಗೆ ಬಿದ್ದ 3 ವರ್ಷದ ಬಾಲಕಿ
ರಕ್ಷಣಾ ಕಾರ್ಯಾಚರಣೆ ಆರಂಭ
ಹೊಸದಿಲ್ಲಿ, ಆ.1: ತೆರೆದ ಕೊಳವೆಬಾವಿಯೊಂದಕ್ಕೆ 3 ವರ್ಷದ ಬಾಲಕಿಯೊಬ್ಬಳು ಬಿದ್ದಿರುವ ಘಟನೆ ಬಿಹಾರದ ಮುಂಗೆರ್ ಜಿಲ್ಲೆಯಲ್ಲಿ ನಡೆದಿದ್ದ, ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದೆ.
ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ಸನ್ನೋ ಕಾಲು ಜಾರಿ 110 ಅಡಿ ಆಳದ ತೆರೆದ ಕೊಳವೆಬಾವಿಯೊಳಕ್ಕೆ ಬಿದ್ದಿದ್ದಾಳೆ ಎನ್ನಲಾಗಿದೆ. ಕೊಳವೆಬಾವಿಯಲ್ಲಿ ಸಿಲುಕಿರುವ ಬಾಲಕಿಗೆ ಆಮ್ಲಜನಕ ಒದಗಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಬೋರ್ ವೆಲ್ ನೊಳಗೆ ಬಾಲಕಿ ಜಾರದಂತೆ ಈಗಾಗಲೇ ರಾಡ್ ಗಳನ್ನು ಇರಿಸಲಾಗಿದೆ ಎಂದು ಎಸ್ ಡಿಆರ್ ಎಫ್ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
Next Story