ಕ್ರೈಸ್ತ ಸನ್ಯಾಸಿನಿಯ ಮೃತದೇಹ ಬಾವಿಯಲ್ಲಿ ಪತ್ತೆ
ಕೊಲ್ಲಂ(ಕೇರಳ), ಸೆ.9: ಕೊಲ್ಲಂಪತ್ತನಾಪುರಂನಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿದೆ. ಮೌಂಟ್ ತಾಬೋರ್ ದಯರ ಕಾನ್ವೆಂಟ್ ನ ಸಿಸ್ಟರ್ ಸೂಸನ್ರ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿದ್ದು, ಅವರಿಗೆ 54 ವರ್ಷ ವಯಸ್ಸಾಗಿತ್ತು.
ಬಾವಿಯ ಸಮೀಪದಲ್ಲಿ ಮತ್ತು ಕಾನ್ವೆಂಟ್ ನ ದಾರಿಯಲ್ಲಿ ರಕ್ತದ ಕಲೆಗಳು ಇವೆ. ಇದು ಕೊಲೆಯೇ.ಅಥವಾ ಆತ್ಮಹತ್ಯೆಯೇ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸ್ಟರ್ ಸೂಸನ್ 12 ವರ್ಷಗಳಿಂದ ಪತ್ತನಾಪುರಂ ಸೇಂಟ್ ಸ್ಟೀಪನ್ಸ್ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದು ಕೊಲ್ಲಂಕಲ್ಲಡದ ನಿವಾಸಿಯಾಗಿದ್ದಾರೆ.
Next Story