ಗುಜರಾತ್: ಗಣರಾಜ್ಯೋತ್ಸವ ಬೈಕ್ ಸಾಹಸದ ವೇಳೆ ಆರು ಮಕ್ಕಳು,ಓರ್ವ ಮಹಿಳಾ ಪೊಲೀಸ್ಗೆ ಗಾಯ
ಪಾಲನಪುರ,ಜ.26: ಇಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಗಣರಾಜ್ಯೋತ್ಸವದಲ್ಲಿ ಬೈಕ್ ಸಾಹಸ ಪ್ರದರ್ಶನದ ಸಂದರ್ಭ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಚಲಾಯಿಸುತ್ತಿದ್ದ ಬೈಕೊಂದು ಸ್ಕಿಡ್ ಆಗಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಮಕ್ಕಳ ಗುಂಪಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಕ್ಕಳು ಗಾಯಗೊಂಡಿದ್ದಾರೆ.
ಮಕ್ಕಳೆಲ್ಲ 11-12 ವರ್ಷ ವಯೋಮಾನದವರಾಗಿದ್ದು,ಕಾನ್ಸ್ಟೇಬಲ್ ರೇಖಾ ಗೋಹಿಲ ಅವರೂ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಗಾಯಾಳುಗಳನ್ನು ಪಾಲನಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್ ಮತ್ತು ಡಿಜಿಪಿ ಶಿವಾನಂದ ಝಾ ಅವರೊಂದಿಗೆ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ ಎಂದು ಬನಾಸಕಾಂತಾ ಎಸ್ಪಿ ಪ್ರದೀಪ ಸೆಜುಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story