ಸೌದಿ ಅರೇಬಿಯದಲ್ಲಿ ಭಾರೀ ಮಳೆ: 12 ಸಾವು
ರಿಯಾದ್, ಜ. 30: ವಾಯುವ್ಯ ಸೌದಿ ಅರೇಬಿಯದಲ್ಲಿ ಈ ವಾರ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಹಾಗೂ 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯ ಹೇಳಿದೆ.
ತಬೂಕ್ನಲ್ಲಿ 10 ಮಂದಿ, ಮದೀನಾದಲ್ಲಿ ಓರ್ವ ಹಾಗೂ ಉತ್ತರದ ಗಡಿ ವಲಯದಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ನಾಗರಿಕ ರಕ್ಷಣಾ ಇಲಾಖೆ ಗುರುವಾರ ತಿಳಿಸಿದೆ.
ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 271 ಮಂದಿಯನ್ನು ರಕ್ಷಿಸಲಾಗಿದೆ ಎಂದು ನಾಗರಿಕ ರಕ್ಷಣಾ ಪಡೆಗಳು ಹೇಳಿವೆ. ಅವರ ಪೈಕಿ ಹೆಚ್ಚಿನವರು ಜೋರ್ಡಾನ್ ನೊಂದಿಗೆ ಗಡಿ ಹೊಂದಿರುವ ಅಲ್-ಜಾವ್ಫ್ ಪ್ರದೇಶದವರು.
ಭಾರೀ ಮಳೆಯಿಂದಾಗಿ ಮರುಭೂಮಿಯ ಕಣಿವೆಗಳಲ್ಲಿ ಪ್ರವಾಹ ಏರಿದೆ ಹಾಗೂ ಶಾಲೆಗಳನ್ನು ಮುಚ್ಚಲಾಗಿತ್ತು.
Next Story