ಬಿಜೆಪಿ ಉಪಾಧ್ಯಕ್ಷೆ ಹುದ್ದೆಗೆ ಉಮಾ ಭಾರತಿ ನೇಮಕ
ಹೊಸದಿಲ್ಲಿ, ಮಾ. 24: ಲೋಕಸಭೆಯಲ್ಲಿ ಸ್ವರ್ಧಿಸದಿರಲು ನಿರ್ಧರಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ ಅವರನ್ನು ಬಿಜೆಪಿ ತನ್ನ ರಾಷ್ಟ್ರೀಯ ಉಪಾಧ್ಯಕ್ಷೆಯನ್ನಾಗಿ ನಿಯೋಜಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಸ್ವರ್ಧಿಸದಿರಲು ನಿರ್ಧರಿಸಿರುವುದಾಗಿ ಬಿಜೆಪಿ ನಾಯಕರಿಗೆ ತಿಳಿಸಿದ ಬಳಿಕ ಝಾನ್ಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಉಮಾ ಭಾರತಿ ಅವರನ್ನು ಪಕ್ಷ ಹಿರಿಯ ಪದಾಧಿಕಾರಿ ಹುದ್ದೆ ನಿಯೋಜಿಸಿದೆ.
ಮೇಯಿಂದ ತಾನು 18 ತಿಂಗಳು ದೀರ್ಘ ಕಾಲ ಯಾತ್ರೆಗೆ ತೆರಳಲು ಬಯಸಿರುವುದಾಗಿ ಉಮಾ ಭಾರತಿ ಹೇಳಿದ್ದಾರೆ.
Next Story