ಬಿಜೆಪಿ ನಾಯಕನ ಮನೆಯಲ್ಲಿ 17 ಬಾಂಬ್ ಗಳು, 10 ಪಿಸ್ತೂಲ್ ಗಳು, 111 ಬುಲೆಟ್ ಗಳು ಪತ್ತೆ
ಅಲ್ಮೇರಾದಲ್ಲಿದ್ದ ಪೆಟ್ಟಿಗೆಯಲ್ಲಿ ಪತ್ತೆಯಾದ ಶಸ್ತ್ರಾಸ್ತಗಳು
ಮಧ್ಯಪ್ರದೇಶ, ಎ.2: ಇಲ್ಲಿನ ಬಿಜೆಪಿ ನಾಯಕನೊಬ್ಬನ ಮನೆಗೆ ದಾಳಿ ನಡೆಸಿದ ಪೊಲೀಸರು 17 ಬಾಂಬ್ ಗಳು, 10 ಪಿಸ್ತೂಲ್ ಗಳು ಮತ್ತು 111 ಬುಲೆಟ್ ಗಳನ್ನು ಪತ್ತೆಹಚ್ಚಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಬಿಜೆಪಿ ನಾಯಕ ಸಂಜಯ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಇಷ್ಟೇ ಅಲ್ಲದೆ ಆತನ ವಿರುದ್ಧ ಹಲವು ಪ್ರಕರಣಗಳಿವೆ.
“ಮನೆಯ ಅಲ್ಮೇರಾದಲ್ಲಿದ್ದ ದೊಡ್ಡ ಪೆಟ್ಟಿಗೆಯೊಂದರಲ್ಲಿ ಬಾಂಬ್, ಪಿಸ್ತೂಲ್ ಗಳು ಪತ್ತೆಯಾಗಿವೆ. ಈ ಶಸ್ತ್ರಾಸ್ತ್ರಗಳನ್ನು ಏಕೆ ಶೇಖರಿಸಿಡಲಾಗಿತ್ತು ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ವಿವಿಧ ಸೆಕ್ಷನ್ ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಯಾಂಗ್ಚೆನ್ ದೋಲ್ಕರ್ ಭುಟಿಯಾ ಮಾಹಿತಿ ನೀಡಿದ್ದಾರೆ.
Next Story