ಬಿಜೆಪಿ ನಾಯಕನ ಮನೆಯಂಗಳದಲ್ಲಿ ಸ್ಫೋಟ: ಇಬ್ಬರು ಮಕ್ಕಳಿಗೆ ಗಾಯ
ಕೋಝಿಕ್ಕೋಡ್, ಮೇ 14: ಸ್ಫೋಟಕ ಸಿಡಿದು ಬಿಜೆಪಿ ನಾಯಕರೊಬ್ಬರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಇಲ್ಲಿನ ಕೊಡುವಳ್ಳಿಯಲ್ಲಿ ನಡೆದಿದೆ.
ಮಕ್ಕಳು ಬಿಜೆಪಿ ನಾಯಕ ಸದಾಶಿವನ್ ಎಂಬವರ ಮನೆಯ ಅಂಗಳದಲ್ಲಿ ಆಡುತ್ತಿದ್ದರು. ಈ ಸಂದರ್ಭ ಸ್ಫೋಟಕ ಸಿಡಿದಿದೆ ಎಂದು ವರದಿಯಾಗಿದೆ. ಗಾಯಗೊಂಡ ವಿದ್ಯಾರ್ಥಿಗಳಾದ ಅದೀಬ್ ರಹ್ಮಾನ್(10) ಮತ್ತು ಜಿತೇವ್(8) ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದಿಂದ ಮಕ್ಕಳ ಕೈ, ಮುಖಕ್ಕೆ ಗಾಯಗಳಾಗಿವೆ. ಆದರೆ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಸದಾಶಿವನ್ ಮನೆಯ ಮುಂಭಾಗದಲ್ಲಿದ್ದ ಮೇಜಿನಲ್ಲಿದ್ದ ವಸ್ತುಗಳಿಗೆ ಮಕ್ಕಳು ಬೆಂಕಿ ಕೊಟ್ಟಿದ್ದರು ಎನ್ನಲಾಗಿದೆ. ಮನೆಯಲ್ಲಿ ಸ್ಫೋಟಕವಿದ್ದದ್ದು ಹೇಗೆ ಎಂಬುದು ತನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕೆಂದು ಸದಾಶಿವನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story