ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ದೇಶಕ್ಕೆ ಪ್ರಥಮ
ಫಣೀಂದ್ರ ರಾಜ್ಯಕ್ಕೆ ಪ್ರಥಮ
ಹೊಸದಿಲ್ಲಿ, ಜೂ.5: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ರಾಜಸ್ಥಾನ ಮೂಲದ ನಳಿನ್ ಖಂಡೆಲ್ವಾಲ(701 ಅಂಕ) ದೇಶಕ್ಕೆ ಪ್ರಥಮ, ದಿಲ್ಲಿ ಮೂಲದ ಭವೀಕ್ ಭನ್ಸಾಲ್(700) ದ್ವಿತೀಯ ಹಾಗೂ ಉತ್ತರಪ್ರದೇಶದ ಅಕ್ಷತ್ ಕೌಶಿಕ್ (700)ಮೂರನೇ ರ್ಯಾಂಕ್ ಪಡೆದಿದ್ದಾರೆ.
36ನೇ ರ್ಯಾಂಕ್ ಪಡೆದಿರುವ ಫಣೀಂದ್ರ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನೀಟ್ ಪರೀಕ್ಷೆಗೆ ಒಟ್ಟು 14,10,755 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 7.97 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
Next Story