ಪಾಕ್ನಿಂದ ಗುರು ನಾನಕ್ರ 550ನೇ ಹುಟ್ಟಿದ ಹಬ್ಬಕ್ಕೆ ನಾಣ್ಯ ಬಿಡುಗಡೆ
ಇಸ್ಲಾಮಾಬಾದ್, ಅ. 30: ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್ರ 550ನೇ ಹುಟ್ಟಿದ ದಿನಾಚರಣೆ ಸಂದರ್ಭದಲ್ಲಿ ಪಾಕಿಸ್ತಾನ ಬುಧವಾರ ಅವರ ಸ್ಮರಣಾರ್ಥ ನಾಣ್ಯವೊಂದನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫೇಸ್ಬುಕ್ ಸಂದೇಶವೊಂದರಲ್ಲಿ ನಾಣ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.
‘‘ಗುರು ನಾನಕ್ ದೇವ್ಜಿಯ 550ನೇ ಹುಟ್ಟಿದ ದಿನದ ಸಂದರ್ಭದಲ್ಲಿ ಪಾಕಿಸ್ತಾನವು ಅವರ ಸ್ಮರಣಾರ್ಥ ನಾಣ್ಯವೊಂದನ್ನು ಬಿಡುಗಡೆ ಮಾಡುತ್ತಿದೆ’’ ಎಂದು ಇಮ್ರಾನ್ ಖಾನ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.
ಗುರು ನಾನಕ್ ದೇವ್ರ ಹುಟ್ಟಿದ ಸ್ಥಳ ನನ್ಕಾನಾ ಸಾಹಿಬ್ಗೆ ಹೋಗುವ ಕರ್ತಾರ್ಪುರ ಕಾರಿಡಾರನ್ನು ನವೆಂಬರ್ 9ರಂದು ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ. ನನ್ಕಾನ ಸಾಹಿಬ್ ಈಗ ಪಾಕಿಸ್ತಾನದಲ್ಲಿದೆ.
Next Story