ಜಾರ್ಖಂಡ್ ನ ಮತದಾನೋತ್ತರ ಸಮೀಕ್ಷೆ ಪ್ರಕಟ: ಅಧಿಕಾರ ಯಾರಿಗೆ ಗೊತ್ತಾ?
ಯಾರಿಗೆ, ಎಷ್ಟು ಸ್ಥಾನ?: ಇಲ್ಲಿದೆ ಸಂಪೂರ್ಣ ವಿವರ
ಹೊಸದಿಲ್ಲಿ: ಜಾರ್ಖಂಡ್ ನ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ಕೊನೆಗೊಂಡಿದ್ದು, ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್-ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾ ದಳ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದು, ಸರಕಾರ ಸ್ಥಾಪಿಸಲಿದೆ ಎಂದಿದೆ.
ಐಎಎನ್ ಎಸ್ - ಸಿ ವೋಟರ್ ಸಮೀಕ್ಷೆಯು ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟವು 31ರಿಂದ 39 ಸೀಟುಗಳನ್ನು ಗಳಿಸಲಿದ್ದು, ಬಿಜೆಪಿ 28ರಿಂದ 36 ಸೀಟುಗಳನ್ನು ಗಳಿಸಲಿದೆ ಎಂದಿದೆ. ಇಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.
ಇಂಡಿಯಾ ಟುಡೆ-ಆ್ಯಕ್ಸಿಸ್ ಇಂಡಿಯಾ 38ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ ಜಯಗಳಿಸಲಿದೆ. ಬಿಜೆಪಿ 22ರಿಂದ 32 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದಿದೆ.
Next Story