ಕೊರೊನಾ ವೈರಸ್ ಸೋಂಕಿನಿಂದ ಮಲೇಶ್ಯಾದಲ್ಲಿ ತ್ರಿಪುರಾದ ವ್ಯಕ್ತಿ ಸಾವು
ತ್ರಿಪುರಾ, ಜ. 30: ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ತ್ರಿಪುರಾದ 23 ವರ್ಷದ ವ್ಯಕ್ತಿಯೋರ್ವ ಮಲೇಶ್ಯಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಯುವಕನನ್ನು ಮಧುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪುರಥಾಲ್ ರಾಜ್ನಗರ್ ಗ್ರಾಮದ ಮುನೀರ್ ಹುಸೈನ್ ಎಂದು ಗುರುತಿಸಲಾಗಿದೆ. ಈತ 2018ರಲ್ಲಿ ಮಲೇಶ್ಯಾಕ್ಕೆ ತೆರಳಿದ್ದ ಹಾಗೂ ಅಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನನ್ನ ಮೊಮ್ಮಗ ಮೃತಪಟ್ಟ ಬಗ್ಗೆ ಮಲೇಶ್ಯಾದ ಅಧಿಕಾರಿಗಳು ಬುಧವಾರ ಬೆಳಗ್ಗೆ ತಿಳಿಸಿದರು ಎಂದು ಮುನೀರ್ ಹುಸೈನ್ನ ಅಜ್ಜ ಅಬ್ದುಲ್ ರಹಿಮಾನ್ ಹೇಳಿದ್ದಾರೆ. ‘‘ನನ್ನ 23 ವರ್ಷದ ಮೊಮ್ಮಗೆ ಸುಮಾರು ಎರಡು ವರ್ಷಗಳ ಹಿಂದೆ ಮಲೇಶ್ಯಾಕ್ಕೆ ಹೋಗಿದ್ದ. ಬುಧವಾರ ಬೆಳಗ್ಗೆ ಮಲೇಶ್ಯಾದ ಅಧಿಕಾರಿಗಳು ಫೋನ್ ಕರೆ ಮಾಡಿದ್ದರು ಹಾಗೂ ಕೊರೊನಾ ವೈರಸ್ನಿಂದ ಆತ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು’’ ಎಂದು ರಹೀಮ್ ಹೇಳಿದ್ದಾರೆ.
Next Story