Breaking News: ದಿಲ್ಲಿಯಲ್ಲಿ ಭೂಕಂಪನ
ಹೊಸದಿಲ್ಲಿ, ಎ.12: ಉತ್ತರಪ್ರದೇಶ ಮತ್ತು ದಿಲ್ಲಿ ಗಡಿಭಾಗದಲ್ಲಿ ಸಂಭವಿಸಿದ ಭೂಕಂಪನದ ಬೆನ್ನಲ್ಲೇ ರವಿವಾರ ಸಂಜೆ ದಿಲ್ಲಿಯ ಹಲವೆಡೆ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಲಘು ಭೂಕಂಪನವಾಗಿದೆ. ಯಾವುದೇ ಸಾವುನೋವು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5ರ ಪ್ರಮಾಣದಲ್ಲಿತ್ತು . 28.7 ಉತ್ತರ ಅಕ್ಷಾಂಶ ಮತ್ತು 77.2 ಪೂರ್ವ ರೇಖಾಂಶದಲ್ಲಿ 8 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ದಿಲ್ಲಿಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಎಲ್ಲರೂ ಸುರಕ್ಷಿತರಾಗಿರುವಿರೆಂದು ಆಶಿಸುತ್ತೇನೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಟ್ವೀಟ್ ಮಾಡಿದ್ದಾರೆ.
Next Story