ಉದ್ಯೋಗಿಗೆ ಕೊರೋನ ವೈರಸ್ ದೃಢ: ಆಯುಷ್ಮಾನ್ ಭಾರತ್ ಕಚೇರಿ ಸೀಲ್
25 ಮಂದಿ ಕ್ವಾರಂಟೈನ್ ನಲ್ಲಿ
ಹೊಸದಿಲ್ಲಿ: ಹೆಚ್ಚುವರಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯೊಬ್ಬರ ಸಹಾಯಕರೊಬ್ಬರಲ್ಲಿ ಕೊರೋನ ವೈರಸ್ ದೃಢಪಟ್ಟ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ ಆಯುಷ್ಮಾನ್ ಭಾರತ್ ಕಚೇರಿಯನ್ನು ಸೀಲ್ ಮಾಡಲಾಗಿದ್ದು, 25 ಉದ್ಯೋಗಿಗಳನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
“ಉದ್ಯೋಗಿಗೆ ಕೊರೋನ ದೃಢಪಟ್ಟ ತಕ್ಷಣ ಕಚೇರಿಯನ್ನು ಸೀಲ್ ಮಾಡಲಾಗಿದೆ. 25 ಉದ್ಯೋಗಿಗಳನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
Next Story