ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ದೋಷಿ ಯೂಸುಫ್ ಮೆಮನ್ ಜೈಲಿನಲ್ಲಿ ಮೃತ್ಯು
ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ದೋಷಿ ಮತ್ತು ತಲೆಮರೆಸಿಕೊಂಡಿರುವ ಟೈಗರ್ ಮೆಮನ್ ಸಹೋದರ ಯೂಸುಫ್ ಮೆಮನ್ ಮಹಾರಾಷ್ಟ್ರದ ನಾಶಿಕ್ ರೋಡ್ ಜೈಲಿನಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಸಾವಿಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1993ರಲ್ಲಿ ಮುಂಬೈಯನ್ನು ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು.
Next Story