ಬಿಜೆಪಿ ನಾಯಕ, ತಂದೆ, ಸಹೋದರನನ್ನು ಗುಂಡಿಕ್ಕಿ ಕೊಂದ ಉಗ್ರರು
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸಿಂ, ಅವರ ತಂದೆ ಮತ್ತು ಸಹೋದರನನ್ನು ಉಗ್ರರ ತಂಡವೊಂದು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬಂಡಿಪೊರ ಜಿಲ್ಲೆಯಲ್ಲಿ ನಡೆದಿದೆ.
ಉಗ್ರರು ದಾಳಿ ನಡೆಸುವಾಗ ಬಿಜೆಪಿ ಜಿಲ್ಲಾಧ್ಯಕ್ಷ ಶೇಖ್ ವಾಸಿಂ ತನ್ನ ಕುಟುಂಬದ ಜೊತೆಗೆ ಅಂಗಡಿಯೊಂದರಲ್ಲಿ ಕುಳಿತುಕೊಂಡಿದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದರು.
“ಬಂಡಿಪೋರಾದಲ್ಲಿ ಬಿಜೆಪಿ ನಾಯಕ ವಾಸಿಂ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ವಾಸಿಂ ಬಾರಿ, ಅವರ ತಂದೆ ಬಶೀರ್ ಅಹ್ಮದ್ ಮತ್ತು ಸಹೋದರ ಉಮರ್ ಬಶೀರ್ ಮೃತಪಟ್ಟಿದ್ದಾರೆ “ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಟ್ವೀಟ್ ಮಾಡಿದೆ.
Next Story