ಭೀಮಾ ಕೋರೆಗಾಂವ್ ಪ್ರಕರಣ: ದಿಲ್ಲಿ ವಿವಿ ಪ್ರಾಧ್ಯಾಪಕ ಹ್ಯಾನಿ ಬಾಬುರನ್ನು ಬಂಧಿಸಿದ ಎನ್ ಐಎ
ಹೊಸದಿಲ್ಲಿ: 2018ರ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ವಿವಿಯ ಸಹಾಯಕ ಪ್ರಾಧ್ಯಾಪಕ ಹ್ಯಾನಿ ಬಾಬು ಅವರನ್ನು ಎನ್ ಐಎ ತಂಡ ಬಂಧಿಸಿದೆ.
ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ನಿವಾಸಿಯಾಗಿರುವ ಹ್ಯಾನಿ ಬಾಬು ವಿವಿಯ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು ಎಂದು ಎನ್ ಐಎ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪ್ರಮುಖ ಹೋರಾಟಗಾರರು, ಚಿಂತಕರು ಮತ್ತು ವಕೀಲರನ್ನು ಬಂಧಿಸಲಾಗಿದ್ದು, ಇದು ಈ ಪ್ರಕರಣದಲ್ಲಿ 12ನೆ ಬಂಧನವಾಗಿದೆ.
Next Story