ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ವಿರುದ್ಧ ಕಣಕ್ಕಿಳಿಯಲಿರುವ ಪತ್ನಿ ಐಶ್ವರ್ಯಾ; ವರದಿ
ಬಿಹಾರ ಚುನಾವಣೆ
ಹೊಸದಿಲ್ಲಿ: ಬಿಹಾರದ ಮಹುವಾ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣವು ರಾಷ್ಟ್ರಿಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಮಾಜಿ ಆಪ್ತ ಚಂದ್ರಿಕಾ ರೈ ಕುಟುಂಬಗಳ ನಡುವಿನ ಪ್ರತಿಷ್ಠೆಯ ಮಾರ್ಪಾಡಾಗುವ ಎಲ್ಲಾ ಸಾಧ್ಯತೆಗಳಿವೆ.
ಆರ್ ಜೆಡಿಯನ್ನು ತೊರೆದಿರುವ ಚಂದ್ರಿಕಾ ರೈ ಜೆಡಿಯು ಸೇರಿದ್ದು, ಅವರ ಪುತ್ರಿ ಐಶ್ವರ್ಯಾ ತನ್ನ ಪರಿತ್ಯಕ್ತ ಪತಿ, ಲಾಲೂ ಪುತ್ರ ತೇಜ್ ಪ್ರತಾಪ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರುವಾರ ಮಾಧ್ಯಮಗಳ ಮುಂದೆ ಮಾತನಾಡಿದ ಚಂದ್ರಿಕಾ ರೈ ಕೂಡ ಐಶ್ವರ್ಯಾ ತೇಜ್ ಪ್ರತಾಪ್ ವಿರುದ್ಧ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
2018ರಲ್ಲಿ ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ವಿವಾಹವಾಗಿದ್ದರು. ಆದರೆ ವಿವಾಹವಾದ 6 ತಿಂಗಳಲ್ಲಿ ತೇಜ್ ಪ್ರತಾಪ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
Next Story