ಈಶಾನ್ಯ ದಿಲ್ಲಿ ನಿವಾಸಿಗಳ ಫೋಟೊ, ವಿಳಾಸಗಳನ್ನು ಪೊಲೀಸರಿಗೆ ನೀಡಿದ್ದ ಚುನಾವಣಾ ಆಯೋಗ

ಹೊಸದಿಲ್ಲಿ,ಆ.24: ಚುನಾವಣಾ ಆಯೋಗವು ಫೆಬ್ರವರಿಯಲ್ಲಿ ಸಂಭವಿಸಿದ್ದ ಗಲಭೆಗಳಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಲು ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಗಳನ್ನು ಪರಿಶೀಲಿಸಲು ಮಾರ್ಚ್ನಲ್ಲಿ ಪೊಲೀಸರಿಗೆ ಅವಕಾಶ ನೀಡಿತ್ತು ಎಂದು ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸ್ವೀಕರಿಸಿದ್ದ ಪತ್ರವೊಂದು ಬಹಿರಂಗಗೊಳಿಸಿದೆ ಎಂದು ಆರ್ ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಮಾ.12ರಂದು ಆಯೋಗವು ದಿಲ್ಲಿ ಸಿಇಒಗೆ ಬರೆದಿದ್ದ ಪತ್ರದ ಫೋಟೊವನ್ನು ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸೋಮವಾರ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಚುನಾವಣಾ ಆಯೋಗವು ತನ್ನದೇ ನಿಯಮಗಳನ್ನು ಉಲ್ಲಂಘಿಸಿದೆ ಮತ್ತು 2020 ಫೆಬ್ರವರಿ ಗಲಭೆಗಳ ಬಳಿಕ ಈಶಾನ್ಯ ದಿಲ್ಲಿಯ ಎಲ್ಲ ನಿವಾಸಿಗಳ ಚಿತ್ರಗಳು ಮತ್ತು ವಿಳಾಸಗಳನ್ನು ದಿಲ್ಲಿ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಗೋಖಲೆ ಆರೋಪಿಸಿದ್ದಾರೆ.
ಮಾ.6ರಂದು ಸಿಇಒ ಪತ್ರಕ್ಕೆ ನೀಡಿದ್ದ ಉತ್ತರದಲ್ಲಿ ಆಯೋಗವು, ಹಾಲಿ ನೀತಿ ಮತ್ತು ಪರಿಪಾಠದಂತೆ ಮತದಾರರ ಕುರಿತು ಮಾಹಿತಿಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಸಿಸಿಟಿವಿ ಫೂಟೇಜ್ಗಳಲ್ಲಿ ಕಂಡುಬಂದಿದ್ದ ದುಷ್ಕರ್ಮಿಗಳ ಚಿತ್ರಗಳನ್ನು ತಾಳೆ ಹಾಕಲು ಈಶಾನ್ಯ ದಿಲ್ಲಿಯ ಫೋಟೋ ಸಹಿತ ಮತದಾರರ ಪಟ್ಟಿಗಳಿಗಾಗಿ ದಿಲ್ಲಿ ಪೊಲೀಸರ ಮನವಿಯನ್ನು ಗಮನಿಸಿ ಸಿಇಒ ತನ್ನ ಕಚೇರಿಯಲ್ಲಿ ತನಿಖಾಧಿಕಾರಿಗಳಿಗೆ ಮತದಾರರ ಪಟ್ಟಿಗಳನ್ನು ಪ್ರದರ್ಶಿಸಲು ಆಯೋಗವು ಅವಕಾಶ ನೀಡಿತ್ತು. ಮತದಾರರ ಪಟ್ಟಿಗಳನ್ನು ಸಿಇಒ ಕಚೇರಿಯಲ್ಲಿ ವೀಕ್ಷಿಸಲು ಪೊಲಿಸರಿಗೆ ಅವಕಾಶ ನೀಡಿದ್ದರಿಂದ ಈ ನಿರ್ಧಾರವು ಮತದಾರರ ಪಟ್ಟಿಗಳನ್ನು ಪೊಲೀಸರಿಗೆ ಹಸ್ತಾಂತರಿಸಬಾರದು ಎಂಬ ಆಯೋಗದ ನಿಯಮಕ್ಕೆ ಅನುಗುಣವಾಗಿತ್ತು ಎಂದು ಆಯೋಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Big breaking:
— Saket Gokhale (@SaketGokhale) August 24, 2020
Election Commission of India broke its own rules & shared photos & addresses of all residents of NE Delhi with the police after the February 2020 pogrom.
Entire voter lists with photos were handed over illegally to enable “identification” of people.
(1/3) pic.twitter.com/TBBrSXmSuK
The @SpokespersonECI should clarify - why was this done against rules?
— Saket Gokhale (@SaketGokhale) August 24, 2020
Scores of young Muslim innocent men were picked up by police arbitrarily.
Are voter lists with photos being shared in other places too for building a “facial recognition” database?
THIS IS SERIOUS!
(3/3)
The 1st line of the order itself admits that voter lists shared with police CANNOT contain photos.
— Saket Gokhale (@SaketGokhale) August 24, 2020
ECI broke these rules & made these full voter lists WITH PHOTOS available to police after the Delhi pogrom.
This is an easy way to identify minorities living in any area.
(2/3)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.