ತಮಿಳುನಾಡು: ಕಾಂಗ್ರೆಸ್ ಸಂಸದ ವಸಂತಕುಮಾರ್ ಕೋವಿಡ್-19ಗೆ ಬಲಿ
ಚೆನ್ನೈ,ಆ.28: ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದ ತಮಿಳುನಾಡಿನ ಕನ್ಯಾಕುಮಾರಿಯ ಕಾಂಗ್ರೆಸ್ ಸಂಸದ ಎಚ್.ವಸಂತಕುಮಾರ್ (70) ಅವರು ಶುಕ್ರವಾರ ಇಲ್ಲಿಯ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೋನ ವೈರಸ್ ಸೋಂಕಿನೊಂದಿಗೆ ಅವರನ್ನು ಆ.10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಸಂತಕುಮಾರ ಅವರಿಗೆ ತೀವ್ರ ನ್ಯುಮೋನಿಯಾ ಉಂಟಾದ ಬಳಿಕ ಅವರ ಸ್ಥಿತಿ ಗಂಭೀರವಾಗಿತ್ತು ಮತ್ತು ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು ಎಂದು ವೈದ್ಯರು ತಿಳಿಸಿದರು.
ಮೊದಲ ಬಾರಿಗೆ ಸಂಸದರಾಗಿದ್ದ ಎಚ್.ವಸಂತಕುಮಾರ್ ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಮತ್ತು ರಾಜ್ಯ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿದ್ದರು.
ಅವರು ಇಲೆಕ್ಟ್ರಾನಿಕ್ಸ್ ಸರಕುಗಳ ಮಾರಾಟ ಮಳಿಗೆಗಳ ಸರಣಿ ವಸಂತ ಆ್ಯಂಡ್ ಕೋ ಮತ್ತು ವಸಂತ ಟಿವಿಯ ಸ್ಥಾಪಕರೂ ಆಗಿದ್ದರು. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ವಸಂತಕುಮಾರ್ ನಿಧನಕ್ಕೆ ಟ್ವಿಟರ್ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story