ಬಾಲಿವುಡ್ ನಟ ಅರ್ಜುನ್ ಕಪೂರ್ಗೆ ಕೊರೋನ
ಹೊಸದಿಲ್ಲಿ, ಸೆ.6: ತನಗೆ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿದೆ ಎಂದು ಬಾಲಿವುಡ್ ನಟ ಅರ್ಜುನ ಕಪೂರ್ ರವಿವಾರ ದೃಢಪಡಿಸಿದರು.
ಇನ್ಸ್ಟಾಗ್ರಾಮ್ನ ಮೂಲಕ ಅರ್ಜುನ್ ತನ್ನ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ್ದಾರೆ.
ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದೇನೆ ಎಂದು ನಿಮಗೆಲ್ಲರಿರೂ ತಿಳಿಸುವುದು ನನ್ನ ಕರ್ತವ್ಯ. ನಾನೀಗ ಆರೋಗ್ಯವಾಗಿದ್ದು, ನನ್ನಲ್ಲಿ ಕೊರೋನದ ಯಾವುದೇ ಗುಣಲಕ್ಷಣ ಇರಲಿಲ್ಲ. ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಅರ್ಜುನ್ ಕಪೂರ್ 2019ರಲ್ಲಿ ಐತಿಹಾಸಿಕ ಡ್ರಾಮಾ ಪಾನಿಪತ್ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.
Next Story