ಯುವಕರ ಉದ್ಯೋಗದ ಹೋರಾಟಕ್ಕೆ ಬೆಂಬಲದ ಅಗತ್ಯ ಇದೆ: ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಸೆ. 9: ಯುವಕರು ಉದ್ಯೋಗಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವ ಅಗತ್ಯ ಇದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಹೇಳಿದ್ದಾರೆ.
ಸ್ಥಗಿತಗೊಂಡ ನೇಮಕಾತಿ, ಪರೀಕ್ಷಾ ದಿನಾಂಕ ಹಾಗೂ ಹೊಸ ಉದ್ಯೋಗಳ ಬಗ್ಗೆ ಯುವಕರು ಧ್ವನಿ ಎತ್ತುತ್ತಿದ್ದಾರೆ ಎಂದು ಅವರು ಹೇಳಿದರು. ತಮ್ಮ ಧ್ವನಿ ಕೇಳುವಂತೆ ಈ ದೇಶದ ಯುವಕರು ಬಯಸುತ್ತಿದ್ದಾರೆ ಎಂದ ಪ್ರಿಯಾಂಕಾ ಗಾಂಧಿ, ‘9 ಬಜೆ 9 ಮಿನಿಟ್ ಯುವೋಂಕಿ ಬಾತ್’ ಹಾಗೂ ‘ಸ್ಟಾಪ್ ಪ್ರೈವೇಟೈಸೇಶನ್ ಸೇವ್ ಗವರ್ನಮೆಂಟ್ ಜಾಬ್’ ಹ್ಯಾಷ್ಟ್ಯಾಗ್ ಬಳಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಕೊರೋನ ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ಘೋಷಿಸಲಾದ ಲಾಕ್ಡೌನ್ನಿಂದಾಗಿ ಈ ವರ್ಷದ ಪ್ರಥಮ ತ್ರೈಮಾಸಿಕ ಶೇ. 23.9 ಜಿಡಿಪಿ ದಾಖಲಾದ ಬಳಿಕ ನಿರುದ್ಯೋಗ ಹೆಚ್ಚಾಗಿರುವ ಬಗ್ಗೆ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Next Story