ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ಗೆ ಕೊರೋನ
ಹೊಸದಿಲ್ಲಿ,ಸೆ.17: ಕೇಂದ್ರ ಸರಕಾರದ ಇನ್ನೋರ್ವ ಸಚಿವನಿಗೆ ಕೊರೋನ ವೈರಸ್ ದೃಢಪಟ್ಟಿದೆ. ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತನಗೆ ಕೊರೋನ ವೈರಸ್ ತಗಲಿರುವುದನ್ನು ದೃಢಪಡಿಸಿದ್ದಾರೆ.
ಮಧ್ಯಪ್ರದೇಶದ ದಾವೊಹ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಿಂಗ್ ಬುಧವಾರ ರಾತ್ರಿ ಕೊರೋನ ಪರೀಕ್ಷೆಯ ಫಲಿತಾಂಶವನ್ನು ಸ್ವೀಕರಿಸಿದ್ದರು.
ನನಗೆ ಕೊರೋನ ದೃಢಪಟ್ಟಿದೆ. ನನ್ನ ಸಂಪರ್ಕದಲ್ಲಿದ್ದವರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಟ್ವಿಟರ್ನಲ್ಲಿ ಸಚಿವರು ವಿನಂತಿಸಿದ್ದಾರೆ.
ಪಟೇಲ್ರ ಸಚಿವ ಸಹೋದ್ಯೋಗಿಗಳಾದ ಅಮಿತ್ ಶಾ, ನಿತಿನ್ ಗಡ್ಕರಿ, ಶ್ರೀಪಾದ ನಾಯಕ್, ಧಮೇಂದ್ರ ಪ್ರಧಾನ್, ಕೈಲಾಶ್ ಚೌಧರಿ,ಅರ್ಜುನ್ ರಾಮ್ ಮೇಘಾವಲ್ ಗಜೇಂದ್ರ ಸಿಂಗ್ ಶೆಖಾವತ್ ಹಾಗೂ ಸುರೇಶ್ ಅಂಗಡಿ ಅವರಿಗೆ ಇತ್ತೀಚೆಗೆ ಕೊರೋನ ದೃಢಪಟ್ಟಿದೆ.ಇವರ ಪೈಕಿ ಕೆಲವರು ಈಗಾಗಲೇ ಗುಣಮುಖರಾಗಿದ್ದಾರೆ. ್
Next Story