ಪತ್ನಿಗೆ ಥಳಿಸಿದ ಹಿರಿಯ ಪೊಲೀಸ್ ಅಧಿಕಾರಿ: ವಿಡಿಯೋ ವೈರಲ್
ಭೋಪಾಲ್, ಸೆ.28: ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪತ್ನಿಗೆ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆಪ್ಟಂಬರ್ 27ರ ದಿನಾಂಕವಿರುವ ವೀಡಿಯೊದಲ್ಲಿ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ(ಎಡಿಜಿ)ಪುರುಷೋತ್ತಮ ಶರ್ಮಾ ಭೋಪಾಲ್ನಲ್ಲಿ ತನ್ನ ಮನೆಯಲ್ಲಿ ಪತ್ನಿಯನ್ನು ಹಿಡಿದು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ಮಹಿಳೆಯನ್ನು ತಳ್ಳಿ ನೆಲಕ್ಕೆ ಬೀಳಿಸಿದ ಬಳಿಕ ಪೊಲೀಸ್ ಅಧಿಕಾರಿ ಮಹಿಳೆಯನ್ನು ಓಡಿ ಹೋಗದಂತೆ ಹಿಡಿದಿಟ್ಟುಕೊಂಡು ಥಳಿಸಲಾರಂಭಿಸಿರಂಭಿಸಿದ್ದಾರೆ. ಅಲ್ಲಿ ಇಬ್ಬರು ಪುರುಷರು ಬಂದು ಪುರುಷೋತ್ತಮನನ್ನು ತಡೆಯುತ್ತಾರೆ. ನೀನು ನನಗೆ ಕತ್ತರಿಯಿಂದ ಹೊಡೆದಿದ್ದೇಕೆ ಎಂದು ಪುರೋಷೋತ್ತಮ್ ತನ್ನ ಪತ್ನಿಗೆ ಕೋಪದಿಂದ ಪ್ರಶ್ನಿಸುತ್ತಿರುವುದು ಕೇಳಿಬಂದಿದೆ. ಇಬ್ಬರು ಪುರುಷರು ಪೊಲೀಸರಿಗೆ ಕರೆ ಮಾಡುತ್ತಾರೆ.ಕೆಂಪು ಬಟ್ಟೆ ಧರಿಸಿದ್ದ ವ್ಯಕ್ತಿ ಬಂದು ಪುರುಷೋತ್ತಮರನ್ನು ಕೆಳಕ್ಕೆ ತಳ್ಳಿ ಮಹಿಳೆಯನ್ನು ಅಲ್ಲಿಂದ ಕರೆದೊಯುತ್ತಾನೆ. ವೀಡಿಯೊದ ಕೊನೆಗೆ ಇದು ನನ್ನ ಆಸ್ತಿ ಎಂದು ಹೇಳುತ್ತಿರುವುದು ಕೇಳಿಬಂತು.
Shocking news of Madhya Pradesh :Special DG Purshottam Sharma brutally assaulting, beating her wife, I think brutality and domestic violence is rising with education and status in India!! #MadhyaPradesh #aajtakHaiTohSahiHai #MPnews #DGP #DG #domesticabuse #domesticviolence pic.twitter.com/0AHBpJOOlu
— Lavina Adwani (@lavina_adwani17) September 28, 2020