ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ: ಅಲಿಗಢ ಐಜಿ
ಹೊಸದಿಲ್ಲಿ: ಹಾಥರಸ್ನಲ್ಲಿ ನಾಲ್ವರಿಂದ ದೌರ್ಜನ್ಯಕ್ಕೆ ಒಳಗಾದ 20 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಅಲಿಗಢ ವಲಯದ ಐಜಿ ಪಿಯೂಶ್ ಮೊರ್ಡಿಯಾ ತಿಳಿಸಿದ್ದಾರೆ.
‘‘ಸೆಪ್ಟಂಬರ್ 22ರಂದು ಸಂತ್ರಸ್ತೆ ಮೂವರು ವ್ಯಕ್ತಿಗಳ ಹೆಸರು ಹೇಳಿದ್ದಾರೆ ಹಾಗೂ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಯಿಂದ ಅತ್ಯಾಚಾರ ನಡೆದಿರುವುದು ದೃಢಪಟ್ಟಿಲ್ಲ. ಮಾದರಿಗಳನ್ನು ವಿಧಿ ವಿಜ್ಞಾನ ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ ಹಾಗೂ ವರದಿಗಾಗಿ ಕಾಯಲಾಗುತ್ತಿದೆ’’ ಎಂದು ಮೊರ್ಡಿಯ ಹೇಳಿದ್ದಾರೆ. ಸೆಪ್ಟಂಬರ್ 14ರಂದು ಸಂತ್ರಸ್ತೆಯ ಸಹೋದರ ದೂರು ದಾಖಲಿಸಿ ವ್ಯಕ್ತಿಯೊರ್ವ ತನ್ನ ಸಹೋದರಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಹೇಳಿದ್ದಾನೆ ಎನ್ನುವುದಾಗಿ ಪಿಯೂಶ್ ಮೊರ್ಡಿಯಾ ಟ್ವೀಟ್ ಮಾಡಿದ್ದಾರೆ.
Next Story