ನೀಟ್ನಲ್ಲಿ ಕೇವಲ ಆರು ಅಂಕಗಳು ದೊರೆತಿದ್ದಕ್ಕೆ ಯುವತಿ ಆತ್ಮಹತ್ಯೆ; ಓಎಂಆರ್ ಶೀಟ್ನಲ್ಲಿ ಆಕೆಗಿತ್ತು 590 ಅಂಕಗಳು!
ಭೋಪಾಲ್ : ಇತ್ತೀಚೆಗೆ ನೀಟ್ ಫಲಿತಾಂಶ ಘೋಷಣೆಯಾದಾಗ ತನಗೆ ಕೇವಲ ಆರು ಅಂಕಗಳು ದೊರಕಿವೆ ಎಂದು ತಿಳಿದು ತೀವ್ರ ದುಃಖಿತಳಾದ ವಿದ್ಯಾರ್ಥಿನಿಯೊಬ್ಬಳು ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಓಎಂಆರ್ ಶೀಟ್ನಲ್ಲಿ ಆಕೆಯ ಅಂಕಗಳು 590 ಎಂದು ತೋರಿಸುತ್ತಿದೆ ಎಂಬುದನ್ನು ಮುಂದಿಟ್ಟುಕೊಂಡು ವಿಧಿ ಸೂರ್ಯವಂಶಿ (18) ಎಂಬ ಹೆಸರಿನ ಈ ವಿದ್ಯಾರ್ಥಿನಿಯನ್ನು ಆಕೆಯ ಹೆತ್ತವರು ಎಷ್ಟೇ ಸಂತೈಸಲು ಯತ್ನಿಸಿದ್ದರೂ ತೀವ್ರ ಖಿನ್ನತೆಗೊಳಗಾಗಿದ್ದ ಆಕೆ ಅಕ್ಟೋಬರ್ 20ರಂದು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ ಎಂದು ವರದಿಯಾಗಿದೆ..
ಈ ಘಟನೆ ಕುರಿತು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿರುವ ಕಾಂಗ್ರೆಸ್ ಸಂಸದ ನಕುಲ್ ನಾಥ್ ಈ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಇಂತಹ ಒಂದು ಗಂಭೀರ ಲೋಪ ಹೇಗಾಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರಲ್ಲದೆ ಸರಕಾರ ಈ ತಪ್ಪಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Next Story