ಅಮೆರಿಕ: ದೈನಂದಿನ ಕೊರೋನ ಸೋಂಕು ಪ್ರಕರಣದಲ್ಲಿ ಹೊಸ ದಾಖಲೆ
ವಾಶಿಂಗ್ಟನ್, ಅ. 24: ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ 79,963 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಒಂದು ದಿನದ ಹೊಸ ದಾಖಲೆಯಾಗಿದೆ.
ಗುರುವಾರ ರಾತ್ರಿ 8:30ರಿಂದ ಶುಕ್ರವಾರ ರಾತ್ರಿ 8:30ರ ಅವಧಿಯಲ್ಲಿ ಈ ಸೋಂಕು ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ ಸುಮಾರು 85 ಲಕ್ಷಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ತಿಳಿಸಿದೆ.
ಇದೇ ಅವಧಿಯಲ್ಲಿ 800ಕ್ಕೂ ಅಧಿಕ ಮಂದಿ ಸಾಂಕ್ರಾಮಿಕದಿಂದಾಗಿ ಸಾವಿಗೀಡಾಗಿದ್ದಾರೆ.
ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 2.23 ಲಕ್ಷವನ್ನು ದಾಟಿದೆ.
Next Story