ಎಥೆನಾಲ್ ಬೆಲೆ ಶೇ.5ರಿಂದ ಶೇ.8ರಷ್ಟು ಏರಿಕೆ
ಹೊಸದಿಲ್ಲಿ,ಅ.29: ಪೆಟ್ರೋಲ್ನ್ನು ಮಂದಗೊಳಿಸಲು ಸೇರಿಸುವ ಎಥೆನಾಲ್ ಬೆಲೆಯನ್ನು ಶೇ.5ರಿಂದ ಶೇ.8ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟವು ಗುರುವಾರ ಒಪ್ಪಿಗೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಗುರುವಾರ ಇಲ್ಲಿ ತಿಳಿಸಿದರು.
ಸರಕಾರದ ಈ ಕ್ರಮದಿಂದ ರೈತರಿಗೆ ಲಾಭದಾಯಕ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ,ಜೊತೆಗೆ ತೈಲ ಆಮದುಗಳನ್ನೂ ತಗ್ಗಿಸುತ್ತದೆ. ಎಥೆನಾಲ್ ಪರಿಸರ ಸ್ನೇಹಿಯಾಗಿರುವುದರಿಂದ ವಾಯುಮಾಲಿನ್ಯವೂ ಕಡಿಮೆಯಾಗುತ್ತದೆ ಎಂದರು.
ಭಾರತದಲ್ಲಿ ಪೆಟ್ರೋಲ್ಗೆ ಶೇ.10ರಷ್ಟು ಎಥೆನಾಲ್ ಅನ್ನು ಮಿಶ್ರಗೊಳಿಸಲಾಗುತ್ತದೆ.
Next Story