ಕುಸಿದು ಬಿದ್ದ 2 ಮಹಡಿಗಳ ಕಟ್ಟಡ: ವೆಬ್ ಸೀರೀಸ್ ನಿಂದ ಬಚಾವಾದರು 75 ಜನ!
ಸಾಂದರ್ಭಿಕ ಚಿತ್ರ
ಮುಂಬೈ: ಎರಡು ಮಹಡಿಗಳ ಕಟ್ಟಡವೊಂದು ಕುಸಿದು ಬಿದ್ದಿದ್ದು, ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ಕಟ್ಟಡದ 75 ನಿವಾಸಿಗಳು ಯಾವುದೇ ಅಪಾಯಗಳಿಲ್ಲದೆ ಪಾರಾಗಿರುವ ಘಟನೆ ಮುಂಬೈಯ ಡೊಂಬಿವಿಲಿಯಲ್ಲಿ ನಡೆದಿದೆ.
ಮುಂಜಾನೆಯವರೆಗೆ ವೆಬ್ ಸೀರೀಸ್ ವೀಕ್ಷಿಸುತ್ತಿದ್ದ ಬಾಲಕ ಕುನಾಲ್ ಮೋಹಿತ್ 75 ಜನರ ಪ್ರಾಣ ಉಳಿಸಿದ್ದಾರೆ.
ತಾನು ಬೆಳಗ್ಗೆ 4 ಗಂಟೆಯವರೆಗೆ ವೆಬ್ ಸೀರೀಸ್ ಒಂದನ್ನು ವೀಕ್ಷಿಸುತ್ತಿದ್ದೆ. ಆ ಸಂದರ್ಭ ಮನೆಯ ಅಡುಗೆ ಕೋಣೆಯ ಭಾಗ ಕುಸಿಯಲು ಆರಂಭಿಸಿತು. ಕೂಡಲೇ ತಾನು ಮನೆಯವರನ್ನು ಮತ್ತು ಕಟ್ಟಡದ ನಿವಾಸಿಗಳನ್ನು ಎಚ್ಚರಿಸಿ ಹೊರಹೋಗುವಂತೆ ಹೇಳಿದೆ ಎಂದು ಕುನಾಲ್ ವಿವರಿಸುತ್ತಾರೆ.
ನಿವಾಸಿಗಳು ಹೊರಬಂದ ಕೆಲ ನಿಮಿಷಗಳಲ್ಲೇ ಕಟ್ಟಡ ಕುಸಿದು ಬಿದ್ದಿದೆ.
Next Story