ಮೋದಿ ಆಪ್ತ ಟ್ರಂಪ್ ಸೋಲಿಗೆ ನೆಹರೂ ಕಾರಣ!
ಹೊಸದಿಲ್ಲಿ: ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಭರ್ಜರಿ ಜಯ ಸಾಧಿಸಿದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಡೊನಾಲ್ಡ್ ಟ್ರಂಪ್ ಸೋಲಿಗೆ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಕಾರಣ ಎಂದು ವ್ಯಂಗ್ಯವಾಡುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತೀಯ ಅಮೆರಿಕನ್ ಕಮಲಾ ಹ್ಯಾರಿಸ್ ಅವರ ಅಜ್ಜ ನೆಹರೂ ಅವರಿಗೆ ಜಂಟಿ ಕಾರ್ಯದರ್ಶಿಯಾಗಿದ್ದರು ಎನ್ನಲಾಗಿದೆ. ದೇಶದ ಎಲ್ಲ ಸಮಸ್ಯೆಗಳಿಗೆ ನೆಹರೂ ಅವರನ್ನು ಬಿಜೆಪಿ ಹಾಗೂ ಪ್ರಧಾನಿ ಮೋದಿ ಹೆಚ್ಚು ದೂರುತ್ತಿರುವ ಹಿನ್ನೆಲೆಯಲ್ಲಿ ಈಗ ಟ್ರಂಪ್ ಸೋಲಿಗೂ ನೆಹರೂ ಕಾರಣ ಎಂಬ ಮೀಮ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Kamala Harris's grandfather was a joint secretary working for Nehru, and he was even sent to Zambia to serve as Advisor to its new President. It is all Nehru's fault.
— Ashok Swain (@ashoswai) November 7, 2020
If Nehru Joint Sec. PV Gopalan hd not sent his daughter Shyamla to study in Berkeley she wd not have married & had Kamala Harris ,who with Biden, wouldn’t hv defeated Modi ji's ‘Ab ki baar Trump Sarkar’ more proof of Nehru interfering @praxpriya @VMimi09 @rupagulab @YangerINC https://t.co/zO4I2k7fY1
— Ravi Verdes (@RaviVerdes) November 7, 2020