ಬೈಡನ್, ಕಮಲಾ ಹ್ಯಾರಿಸ್ಗೆ ಸೋನಿಯಾ ಅಭಿನಂದನೆ
ಹೊಸದಿಲ್ಲಿ, ನ.9: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದಿಸಿದ್ದಾರೆ.
ಚುನಾವಣಾ ಪ್ರಸಾರದ ಸಂದರ್ಭ ತೂಕದ ಮಾತು ಹಾಗೂ ಲಿಂಗ ಮತ್ತು ಜಾತಿ ಸಮಾನತೆಯ ಭರವಸೆ ಭಾರತೀಯರ ಮನ ಗೆದ್ದಿದೆ. ಅಮೆರಿಕ ಚುನಾವಣೆಯ ಫಲಿತಾಂಶದ ಬಗ್ಗೆ ಕಳೆದ ಒಂದು ವರ್ಷದಿಂದ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದರು ಎಂದು ಸೋನಿಯಾ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪರವಾರಿ ಬೈಡನ್ ಮತ್ತು ಕಮಲಾ ಹ್ಯಾರಿಸ್ರಿಗೆ ಸೋನಿಯಾ ಗಾಂಧಿ ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
Next Story