ಟಿಆರ್ ಪಿ ತಿರುಚಿದ ಪ್ರಕರಣ: ರಿಪಬ್ಲಿಕ್ ಟಿವಿಯ ಉಪಾಧ್ಯಕ್ಷ, ಡಿಸ್ಟ್ರಿಬ್ಯೂಶನ್ ಮುಖ್ಯಸ್ಥ ಬಂಧನ
ಮುಂಬೈ,ನ.10: ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ವಿತರಣಾ ವಿಭಾಗದ ಮುಖ್ಯಸ್ಥ ಘನಶ್ಯಾಮ ಸಿಂಗ್ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದರೊಂದಿಗೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 12ಕ್ಕೇರಿದೆ.
ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಸಹಾಯಕ ಉಪಾಧ್ಯಕ್ಷರೂ ಆಗಿರುವ ಸಿಂಗ್ ಅವರನ್ನು ಬೆಳಿಗ್ಗೆ ಅವರ ನಿವಾಸದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಸಿಂಗ್ ಅವರನ್ನು ಈ ಹಿಂದೆ ಪೊಲೀಸರು ಹಲವಾರು ಬಾರಿ ವಿಚಾರಣೆಗೊಳಪಡಿಸಿದ್ದರು.
Next Story