ಮಹಿಳಾ ನ್ಯಾಯಾಧೀಶರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
ಮುಂಗೇಲಿ (ಚತ್ತೀಸ್ಗಢ), ನ. 15: ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರೊಬ್ಬರ ಮೃತದೇಹ ಇಲ್ಲಿನ ಮುಂಗೇಲಿ ಜಿಲ್ಲೆಯ ಕಾರ್ಹಿ ಪ್ರದೇಶದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿದೆ.
ಮುಂಗೇಲಿಯ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತಾ ಮಾರ್ಟಿನ್ (55) ಅವರ ಮೃತದೇಹ ಕಾರ್ಹಿ ಪ್ರದೇಶದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಮುಂಗೇಲಿ ಪೊಲೀಸ್ ಅಧೀಕ್ಷಕ ಅರವಿಂದ್ ಕುಜೂರ್ ತಿಳಿಸಿದ್ದಾರೆ. ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಯಾವುದೇ ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
Next Story