ಭೀಕರ ರಸ್ತೆ ಅಪಘಾತ: 10 ಮಂದಿ ಮೃತ್ಯು
ವಡೋದರ: ಗುಜರಾತ್ ನ ವಡೋದರದ ವಡೊಡಿಯಾದಲ್ಲಿ ಎರಡು ಟ್ರಕ್ ಗಳ ನಡುವೆ ಬುಧವಾರ ಬೆಳಗ್ಗೆ ನಡೆದಿರುವ ಢಿಕ್ಕಿಯ ಪರಿಣಾಮವಾಗಿ 10 ಮಂದಿ ಮೃತಪಟ್ಟಿದ್ದರೆ, ಕನಿಷ್ಠ 15 ಜನರು ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಬಲಿಯಾದವರು ಸೂರತ್ ನಿಂದ ಪಾವಗಧ್ ಗೆ ತೆರಳುತ್ತಿದ್ದರು. ಗಾಯಾಳುಗಳನ್ನು ವಡೋದರದ ಎಸ್ ಎಸ್ ಜಿ ಆಸ್ಪತ್ರೆಗೆ ಸೇರಿಸಲಾಗಿದೆ.
ರಸ್ತೆ ಅಪಘಾತದಿಂದ ಮೃತಪಟ್ಟವರ ಕುರಿತು ಶೋಕ ವ್ಯಕ್ತಪಡಿಸಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗಾಯಾಳುಗಳಿಗೆ ಅಗತ್ಯದ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
Next Story