ವಿಧವೆ ಸೊಸೆಯ ಮೂಗು, ನಾಲಿಗೆಯನ್ನು ತುಂಡರಿಸಿದ ಅತ್ತೆ-ಮಾವ
ಜೈಸಲ್ಮೇರ್(ರಾಜಸ್ಥಾನ),ನ.18: ತಮ್ಮ ಇಷ್ಟದಂತೆ ಮರುಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಅತ್ತೆ ಮತ್ತು ಮಾವ ಸೇರಿಕೊಂಡು 30ರ ಹರೆಯದ ವಿಧವೆಯ ಮೂಗು ಮತ್ತು ನಾಲಿಗೆಯನ್ನು ತುಂಡರಿಸಿದ ಘಟನೆ ಮಂಗಳವಾರ ಇಲ್ಲಿಯ ಸಂಕ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಜಾನು ಖಾನ್ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
ಮಹಿಳೆಯ ಅತ್ತೆಯ ಮನೆಯವರು ಆಕೆಯನ್ನು ತಮ್ಮ ಸಂಬಂಧಿಯೊಂದಿಗೆ ಮದುವೆ ಮಾಡಲು ಬಯಸಿದ್ದರು ಮತ್ತು ಮಹಿಳೆ ಇದಕ್ಕೆ ನಿರಾಕರಿಸಿದ್ದಳು ಎಂದರು.
Next Story