ಕೋವ್ಯಾಕ್ಸಿನ್ ಪರೀಕ್ಷಾರ್ಥ ಪ್ರಯೋಗದ ಡೋಸ್ ಪಡೆದ ಹರ್ಯಾಣ ಆರೋಗ್ಯ ಸಚಿವ
ಹೊಸದಿಲ್ಲಿ: ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗ ಇಂದು ಹರ್ಯಾಣದಲ್ಲಿ ಆರಂಭವಾಗಿದ್ದು, ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಝ್ ಅವರು ಸ್ವಯಂ ಇಚ್ಛೆಯಿಂದ ಪರೀಕ್ಷಾರ್ಥ ಡೋಸನ್ನು ಇಂದು ಪಡೆದಿದ್ದಾರೆ.
ಅಂಬಾಲದ ಕಂಟೋನ್ಮೆಂಟ್ನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಉಸ್ತುವಾರಿಯಡಿ ಲಸಿಕೆಯ ಪರೀಕ್ಷಾರ್ಥ ಡೋಸ್ನ್ನು ತೆಗೆದುಕೊಂಡರು.
67ರ ವಯಸ್ಸಿನ ವಿಝ್ ಸ್ವಯಂ ಇಚ್ಛೆಯಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅಂಬಾಲದ ಸಿವಿಲ್ ಆಸ್ಪತ್ರೆಯಲ್ಲಿ ಪರೀಕ್ಷಾರ್ಥ ಡೋಸನ್ನು ಪಡೆಯುವುದಾಗಿ ಗುರುವಾರ ಟ್ವಿಟರ್ನಲ್ಲಿ ಘೋಷಿಸಿದ್ದರು.
ಕೋವ್ಯಾಕ್ಸಿನ್ನ ಪರೀಕ್ಷಾರ್ಥ ಪ್ರಯೋಗದ ಮೂರನೇ ಹಂತದಲ್ಲಿದೆ. ಈ ಹಂತದಲ್ಲಿ ದೇಶಾದ್ಯಂತ 26,000 ಸ್ವಯಂ ಸೇವಕರು ಲಸಿಕೆಯನ್ನು ಪಡೆಯಲಿದ್ದಾರೆ ಎಂದು ಭಾರತ್ ಬಯೋಟೆಕ್ ಸೋಮವಾರ ಘೋಷಿಸಿತ್ತು. ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
Next Story