ಬಿಜೆಪಿ ಮುಖಂಡರ ಕುಟುಂಬಗಳ ಅಂತರ್ ಧರ್ಮೀಯ ವಿವಾಹದ ಬಗ್ಗೆ ಕಾಲೆಳೆದ ಕಾಂಗ್ರೆಸ್
ಭೂಪೇಶ್ ಬಘೇಲ್
ರಾಯಪುರ, ನ.22: ಬಿಜೆಪಿ ಮುಖಂಡರ ಕುಟುಂಬಗಳಲ್ಲಿ ನಡೆದಿರುವ ಅಂತರ್ ಧರ್ಮೀಯ ವಿವಾಹವೂ 'ಲವ್ ಜಿಹಾದ್' ವ್ಯಾಖ್ಯೆಯಲ್ಲಿ ಬರುತ್ತದೆಯೇ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಬಿಜೆಪಿಯ ಕಾಲೆಳೆದಿದ್ದಾರೆ.
"ಹಲವು ಬಿಜೆಪಿ ಮುಖಂಡರ ಕುಟುಂಬದ ಸದಸ್ಯರು ಕೂಡಾ ಅಂತರ್ ಧರ್ಮೀಯ ವಿವಾಹ ನಡೆಸಿದ್ದಾರೆ. ಈ ವಿವಾಹಗಳು ಕೂಡಾ ಲವ್ ಜಿಹಾದ್ ವ್ಯಾಖ್ಯೆಯಲ್ಲಿ ಸೇರುತ್ತವೆಯೇ ಎಂದು ನಾನು ಬಿಜೆಪಿ ಮುಖಂಡರನ್ನು ಪ್ರಶ್ನಿಸಬಯಸುತ್ತೇನೆ" ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ 'ಲವ್ ಜಿಹಾದ್' ಪ್ರಕರಣಗಳನ್ನು ನಿರ್ಬಂಧಿಸಲು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ ಬೆನ್ನಲ್ಲೇ ಬಘೇಲ್ ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಕೂಡಾ 'ಲವ್ ಜಿಹಾದ್' ವಿರುದ್ಧ ಕಾನೂನು ರೂಪಿಸಲಾಗುವುದು ಎಂದು ಘೋಷಿಸಿತ್ತು.
Next Story