ರಾಜಸ್ಥಾನ: ಗೋಶಾಲೆಯ 75 ಹಸುಗಳು ಸಾವು
ಸಾಂದರ್ಭಿಕ ಚಿತ್ರ
ಜೈಪುರ (ರಾಜಸ್ಥಾನ), ನ. 22: ಚುರು ಜಿಲ್ಲೆಯ ಸರ್ದಾರ್ಶಹರಾ ರಾಮ್ಪುರದ ಸರಕಾರಿ ಅನುದಾನಿತ ಖಾಸಗಿ ಗೋ ಶಾಲೆಯಲ್ಲಿ ಶಂಕಿತ ವಿಷಾಹಾರ ಸೇವಿಸಿ ಕಳೆದ 24 ಗಂಟೆಗಳಲ್ಲಿ ಒಟ್ಟು 75 ಹಸುಗಳು ಸಾವನ್ನಪ್ಪಿವೆ.
ಶುಕ್ರವಾರ ರಾತ್ರಿಯಿಂದ 78 ಹಸುಗಳು ಮೃತಪಟ್ಟಿವೆ. ಕೆಲವು ಅಸ್ವಸ್ಥಗೊಂಡಿವೆ ಎಂದು ರಾಜ್ಯ ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಗೋವುಗಳು ವಿಷಾಹಾರ ಸೇವನೆಯಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಇಲಾಖೆಯ ತಂಡ ರಾಮ್ಪುರಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಮೇವಿನ ಮಾದರಿ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story