ಜ. 8ರಂದು ಮುಂಬೈ ಪೊಲೀಸರ ಮುಂದೆ ಹಾಜರಾಗಲಿರುವ ಕಂಗನಾ ರಾಣಾವತ್, ರಂಗೋಲಿ ಚಂದೇಲ್
ಹೊಸದಿಲ್ಲಿ, ನ. 24: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿರುವುದಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ನಟಿ ಕಂಗನಾ ರಾಣಾವತ್ ಹಾಗೂ ಅವರ ಸಹೋದರಿ ರಂಗೋಲಿ ಚಂದೇಲ್ ಜನವರಿ 8ರಂದು ಮುಂಬೈ ಪೊಲೀಸರ ಮುಂದೆ ಹಾಜರಾಗಲಿದ್ದಾರೆ.
ಮೂರು ಸಮನ್ಸ್ಗಳನ್ನು ನೀಡಲಾಗಿದ್ದರೂ ಪೊಲೀಸರ ಮುಂದೆ ಹಾಜರಾಗದ ಬಳಿಕ ಕಂಗನಾ ರಾಣಾವತ್ ಹಾಗೂ ರಂಗೋಲಿ ಚಂದೇಲ್ ಎಫ್ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು.
Next Story