ಮೋದಿ ಸರಕಾರದ ಹೊಸ ಎಫ್ಡಿಐ ನೀತಿಗೆ ಬಲಿಯಾಗಿ ಬಾಗಿಲು ಮುಚ್ಚಿದ 'ಹಫ್ಪೋಸ್ಟ್ ಇಂಡಿಯಾ'

ನವದೆಹಲಿ: 'ಬಝ್ ಫೀಡ್' ಮತ್ತು 'ಹಫ್ಪೋಸ್ಟ್' ನಡುವೆ ಇತ್ತೀಚೆಗೆ ನಡೆದ ಒಪ್ಪಂದದ ನಂತರದ ಬೆಳವಣಿಗೆಯಲ್ಲಿ ಹಫ್ ಪೋಸ್ಟ್ ನ ಭಾರತೀಯ ಆವೃತ್ತಿಯಾಗಿರುವ ಆನ್ಲೈನ್ ಸುದ್ದಿ ಮತ್ತು ಲೈಫ್ ಸ್ಟೈಲ್ ವೆಬ್ ಸೈಟ್ HuffPost India ಬಾಗಿಲು ಹಾಕಿದೆ.
ಈ ಕುರಿತು ಹಫ್ಪೋಸ್ಟ್ ಇಂಡಿಯಾದ ಮುಖ್ಯ ಸಂಪಾದಕ ಅಮನ್ ಸೇಠಿ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. "ಇಂದು @huffpostIndiaದ ಕೊನೆಯ ದಿನ. ಇದು ನಾನು ಕೆಲಸ ಮಾಡಿದ ಅತ್ಯುತ್ತಮ ನ್ಯೂಸ್ ರೂಂ ಆಗಿದೆ (ಅದನ್ನು ಮುನ್ನಡೆಸುವ ಅವಕಾಶ ನನಗೆ ದೊರಕಿತ್ತು ಎಂದು ನನಗೆ ಈಗಲೂ ನಂಬಲು ಆಗುತ್ತಿಲ್ಲ)ನಮ್ಮ ಬರಹಗಳನ್ನು ಓದಿ ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು,'' ಎಂದು ಅವರು ಟ್ವೀಟ್ ಮಾಡಿದ್ದಾರೆ.
HuffPost India ವೆಬ್ಸೈಟ್ಗೆ ಭೇಟಿ ನೀಡಿದವರಿಗೆ "ನವೆಂಬರ್ 24ರಿಂದ ಹಫ್ಪೋಸ್ಟ್ ಇಂಡಿಯಾ ಯಾವುದೇ ಸುದ್ದಿ ಪ್ರಕಟಿಸುವುದಿಲ್ಲ,'' ಎಂಬ ಸಂದೇಶ ಕಾಣುತ್ತದೆ.
ಹಫ್ಪೋಸ್ಟ್ ಇಂಡಿಯಾ ಮುಚ್ಚಿದೆ ಎಂದು ತಿಳಿಯುತ್ತಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿದ 'The Wire' ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್, "ಡಿಜಿಟಲ್ ಮಾಧ್ಯಮದಲ್ಲಿ ಎಫ್ಡಿಐ ಕುರಿತ ಮೋದಿ ಆದೇಶ ಮೊದಲ ತಲೆ ಪಡೆದಿದೆ. @HuffPostIndia ಬಾಗಿಲು ಮುಚ್ಚಿದೆ. ಬಝ್ಫೀಡ್ ಸಂಸ್ಥೆ ಹಫ್ಪೋಸ್ಟ್ ಅನ್ನು ಖರೀದಿಸಿದಾಗ ಅದು ಬ್ರೆಝಿಲ್ ಮತ್ತು ಭಾರತವನ್ನು ಒಪ್ಪಂದದಿಂದ ಹೊರಗಿಟ್ಟಿತು. ಹೊಸ ಎಫ್ಡಿಐ ಮಿತಿ ಹಾಗೂ ನಿಯಂತ್ರಣಾ ವ್ಯವಸ್ಥೆಯ ಅನಿಶ್ಚಿತತೆಯಿಂದಾಗಿ ಭಾರತದಲ್ಲಿ ಉಳಿಯಲು ಆಸಕ್ತಿ ವಹಿಸಲಾಗಿಲ್ಲ. ಆತ್ಮನಿರ್ಭರ್ ನೀತಿಗೆ 12 ಉದ್ಯೋಗಗಳು ನಷ್ಟವಾಗಿವೆ,'' ಎಂದು ಬರೆದಿದ್ದಾರೆ.
ಬಿಬಿಸಿ ವರದಿಯೊಂದರ ಪ್ರಕಾರ ವೆರಿಝಾನ್ ಮೀಡಿಯಾ ಸಂಸ್ಥೆಯು ಬಝ್ಫೀಡ್ನಲ್ಲಿ ಅಲ್ಪಸಂಖ್ಯಾತ ಪಾಲು ಬಂಡವಾಳದಾರನಾಗಲಿದೆ.
ಬಝ್ಫೀಡ್ ಚೀಫ್ ಎಕ್ಸಿಕ್ಯುಟಿವ್ ಜೋನಾಹ್ ಪೆರೆಟ್ಟಿ ಎರಡೂ ಉದ್ಯಮಗಳನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಹಫಿಂಗ್ಟನ್ ಪೋಸ್ಟ್ ಎಂದು ಕರೆಯಲ್ಪಡುತ್ತಿದ್ದ ಹಫ್ ಪೋಸ್ಟ್ ಅನ್ನು ಅವರು 2005ರಲ್ಲಿ ಪ್ರಕಾಶಕ ಅರಿಯಾನ್ನ ಹಫಿಂಗ್ಟನ್ ಜತೆ ಆರಂಭಿಸಿ ನಂತರ ಒಂದು ವರ್ಷ ತರುವಾಯ ಬಝ್ ಫೀಡ್ ಆರಂಭಿಸಿದ್ದರು.
Today is @huffpostIndia’s last day. Pound for pound, story for story, reporter for reporter, this is the greatest newsroom I have worked for; (and I still can’t quite believe I had the privilege to lead)
— Aman Sethi (@Amannama) November 24, 2020
Thank you everyone for reading our stories and supporting our journalism
Modi Diktat on FDI for digital media claims first scalp. @HuffPostIndia shuts shop. When @BuzzFeed bought @HuffPost, it kept Brazil & India out of deal. India was no go because of new FDI cap and regulatory uncertainty. 12 jobs lost to atmanirbhar policy. https://t.co/g4MAHmQ3TP
— Siddharth (@svaradarajan) November 24, 2020
RIP to Huffington Post India.
— Anoo Bhuyan (@AnooBhu) November 24, 2020
All their content is wiped out. https://t.co/id0xgXWrZI pic.twitter.com/TOSvyKNyBv
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.