ಮುಂದಿನ 24 ಗಂಟೆಯಲ್ಲಿ ಕೇರಳ, ತ.ನಾ. ಪುದಚೇರಿಯಲ್ಲಿ ಭಾರೀ ಮಳೆ ಸಾಧ್ಯತೆ
ಹೊಸದಿಲ್ಲಿ, ಜ. 7: ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
‘‘ಮುಂದಿನ 24 ಗಂಟೆಗಳ ಕಾಲ ಕೇರಳ ಹಾಗೂ ಮಾಹೆ, ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್ನ ಕೆಲೆವೆಡೆ ಭಾರೀ ಮಳೆ ಸುರಿಯಲಿದೆ’’ ಎಂದು ಹವಾಮಾನ ಇಲಾಖೆ ಟ್ವೀಟ್ನಲ್ಲಿ ಹೇಳಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಚದುರಿದ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Next Story