ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ಟ್ವೀಟ್
ಹೊಸದಿಲ್ಲಿ,ಜ.11: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಗೆ ಇಂದು ಮಧ್ಯಾಹ್ನ ಮಗು ಜನಿಸಿರುವ ಕುರಿತು ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೆ ನೀಡಿದ್ದಾರೆ. "ನಮಗೆ ಹೆಣ್ಣು ಮಗು ಜನಿಸಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ" ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
"ಇಂದು ಮಧ್ಯಾಹ್ನ ನಾವು ಹೆಣ್ಣು ಮಗುವಿನ ಜನನದಿಂದ ಅನುಗ್ರಹೀತಗೊಂಡಿದ್ದೇವೆ. ನಮ್ಮ ಮೇಲೆ ತೋರಿದ ಪ್ರೀತಿ, ಹಾರೈಕೆ ಹಾಗೂ ಪ್ರಾರ್ಥನೆಗಳಿಗಾಗಿ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ಅನುಷ್ಕಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಹೊಸ ಪಯಣವನ್ನು ಮುಂದುವರಿಸಲು ನಾವು ಕುತೂಹಲಭರಿತರಾಗಿದ್ದೇವೆ. ಈ ಸಂದರ್ಭದಲ್ಲಿ ನೀವೆಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸುತ್ತೀರೆಂದು ತಿಳಿದುಕೊಂಡಿದ್ದೇವೆ" ಎಂದು ಕೊಹ್ಲಿ ಟ್ವಿಟರ್ ಮುಖಾಂತರ ಹೇಳಿಕೆ ನೀಡಿದ್ದಾರೆ.
— Virat Kohli (@imVkohli) January 11, 2021
Next Story