ಕೋವಿಶೀಲ್ಡ್ ಲಸಿಕೆ ಸ್ವೀಕರಿಸಿದ ಸೀರಂ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ
ಹೊಸದಿಲ್ಲಿ: ಕೋವಿಡ್-19 ಲಸಿಕೆಯ ಪರಿಣಾಮಕಾರಿತ್ವವನ್ನು ನಿರೂಪಿಸುವ ಹಾಗೂ ಅಪನಂಬಿಕೆಯನ್ನು ದೂರವಾಗಿಸುವ ನಿಟ್ಟಿನಲ್ಲಿ ಲಸಿಕೆಯ ತಯಾರಿಕಾ ಸಂಸ್ಥೆ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಸ್ ಐಐ) ಸಿಇಒ ಅದಾರ್ ಪೂನಾವಾಲಾ ಶನಿವಾರದಂದು ಕೋವಿಶೀಲ್ಡ್ ಲಸಿಕೆಯನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ಪಡೆಯುವ ವೀಡಿಯೊ ಪೋಸ್ಟ್ ಮಾಡಿರುವ ವಿಶ್ವದ ಅತಿ ದೊಡ್ಡ ಔಷಧ ತಯಾರಕ ಸಂಸ್ಥೆ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಜಗತ್ತಿನ ಅತಿ ದೊಡ್ಡ ಲಸಿಕೆ ಹಂಚಿಕೆ ಅಭಿಯಾನವನ್ನು ಆರಂಭಿಸಿರುವ ಪ್ರದಾನಿ ಮೋದಿಗೆ ಯಶಸ್ಸು ಸಿಗಲಿ ಎಂದು ಶುಭಾಶಯ ಕೋರಿದರು.
#WATCH | Pune: Serum Institute of India CEO Adar Poonawalla receives a shot of #COVISHIELD vaccine manufactured by his company.
— ANI (@ANI) January 16, 2021
(Video credit - Poonawalla's Twitter account) pic.twitter.com/grC4uKc804
Next Story