ಸೋಮವಾರದ ತನಕ ಲಸಿಕೆ ನೀಡಿಕೆ ಸ್ಥಗಿತಗೊಳಿಸಿದ ಮಹಾರಾಷ್ಟ್ರ
ಮುಂಬೈ: ಕಾರ್ಯಕ್ರಮವನ್ನು ನಿರ್ವಹಿಸಲು ಕೇಂದ್ರ ಸರಕಾರದ ಸಾಫ್ಟ್ ವೇರ್ ಪ್ಲಾಟ್ ಫಾರ್ಮ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಮಹಾರಾಷ್ಟ ಸರಕಾರ ಸೋಮವಾರದ ತನಕ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದೆ ಎಂದು ಸುದ್ದಿಸಂಸ್ಥೆ ಎಎನ್ ಐ ಶನಿವಾರ ವರದಿ ಮಾಡಿದೆ.
ಕೋವಿಡ್ ಆ್ಯಪ್ ದಿನವಿಡೀ ತೊಂದರೆ ಉಂಟು ಮಾಡಿದೆ. ಕೆಲವು ಸ್ಥಳಗಳಲ್ಲಿ ಚುಚ್ಚುಮದ್ದು ಪ್ರಕ್ರಿಯೆ ನಿಧಾನಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಸ್ಥಾಪಿಸಲಾಗಿರುವ 3,000ಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ ಮೊದಲ ದಿನ 3 ಲಕ್ಷಕ್ಕೂ ಅಧಿಕ ಲಸಿಕೆ ನೀಡಲು ಗುರಿ ಹಾಕಿಕೊಳ್ಳಲಾಗಿದೆ. ದಿನದಂತ್ಯಕ್ಕೆ 1.91 ಲಕ್ಷ ಮಂದಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಲಸಿಕೆ ಅಭಿಯಾನದ ಮೊದಲ ದಿನ ಸರಕಾರ ತಿಳಿಸಿದೆ.
Next Story