ಕಂಗನಾ ಖಾತೆಗೆ ತಾತ್ಕಾಲಿಕ ನಿರ್ಬಂಧ ಹೇರಿದ ಟ್ವಿಟರ್: 'ರಿಲೋಡೆಡ್ ದೇಶಭಕ್ತಿ ವರ್ಷನ್' ಮೂಲಕ ಮತ್ತೆ ಬರುತ್ತೇನೆಂದ ನಟಿ

ಮುಂಬೈ,ಜ.20: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ಟಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂಬುದನ್ನು ಸ್ವತಃ ನಟಿಯೇ ಇಂದು ಹೇಳಿಕೊಂಡಿದ್ದಾರೆ. ಜತೆಗೆ ತನ್ನ ವರ್ಚುವಲ್ ಅಸ್ಮಿತೆಯನ್ನು ಈ ರೀತಿ ಅಂತ್ಯಗೊಳಿಸುವ ಯತ್ನ ನಡೆಸಲಾಗಿದೆ ಎಂದೂ ಹೇಳಿಕೊಂಡ ಆಕೆ ತನ್ನ 'ರಿಲೋಡೆಡ್ ದೇಶ್ ಭಕ್ತ್ ವರ್ಷನ್ʼ ತನ್ನ ಚಿತ್ರಗಳಲ್ಲಿ ಮತ್ತೆ ಕಾಣಿಸಲಿದೆ ಎಂದು ತಿಳಿಸಿದ್ದಾರೆ.
ʼತಾಂಡವ್ʼ ವೆಬ್ ಸರಣಿ ಕುರಿತು ಆಕೆ ಮಾಡಿರುವ, ಈಗ ಡಿಲೀಟ್ ಮಾಡಲ್ಪಟ್ಟಿರುವ ಟ್ವೀಟ್ ಈ ಕ್ರಮಕ್ಕೆ ಕಾರಣವೆಂದು ತಿಳಿಯಲಾಗಿದೆ. "ಅವರ ತಲೆಗಳನ್ನು ತೆಗೆಯುವ ಸಮಯ ಬಂದಿದೆ" ಎಂದು ಹಿಂದು ದೇವ ದೇವತೆಗಳನ್ನು ಅವಮಾನಿಸಿದ ಆರೋಪ ಎದುರಿಸುತ್ತಿರುವ ತಾಂಡವ್ ವೆಬ್ ಸರಣಿ ತಂಡದ ವಿರುದ್ಧ ಕಂಗನಾ ಈ ಹಿಂದೆ ಹರಿಹಾಯ್ದಿದ್ದರು.
ತನ್ನ ಹಲವು ಟ್ವೀಟ್ ಹಾಗೂ ಹೇಳಿಕೆಗಳಿಂದ ಸದಾ ವಿವಾದದ ಸುಳಿಯಲ್ಲಿಯೇ ಇರುವ ಕಂಗನಾ "ಲಿಬ್ರಸ್(ಪ್ರಗತಿಪರರು) ತಮ್ಮ ಚಾಚಾ @ಜ್ಯಾಕ್ ಅವರ ಬಳಿ ಗೋಗರೆದು ನನ್ನ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ ಹಾಗೂ ನನ್ನ ಖಾತೆ/ ವರ್ಚುವಲ್ ಗುರುತು ಯಾವತ್ತು ಬೇಕಾದರೂ ದೇಶಕ್ಕಾಗಿ ತ್ಯಾಗವಾಗಬಹುದು," ಎಂದು ಹೇಳಿದ್ದಾರೆ. "ಅದರೆ ನನ್ನ ರಿಲೋಡೆಡ್ ದೇಶ್ ಭಕ್ತ ವರ್ಷನ್ ನನ್ನ ಚಿತ್ರಗಳಲ್ಲಿ ಮರುಕಾಣಿಸಲಿದೆ. ತುಮ್ಹಾರಾ ಜೀನಾ ದುಶ್ವ್ರ್ ಕರ್ಕೇ ರಹೂಂಗಿ (ನಿನ್ನ ಜೀವನವನ್ನು ಕಷ್ಟಕರವಾಗಿಸುತ್ತೇನೆ)'' ಎಂದು ಕಂಗನಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
Librus cried to their chacha @jack and got my account temporarily restricted, they are threatening me mera account/virtual identity kabhi bhi desh keliye shaheed ho sakti hai,magar my reloaded desh bhakt version will reappear through my movies.Tumhara jeena dushwar karke rahungi.
— Kangana Ranaut (@KanganaTeam) January 20, 2021
Anti nationals are trending #SuspendKanganaRanaut .... please do, when they suspended Rangs I came and made their lives even more miserable,now if they suspend me will exit virtual world and in real world will show you real Kangana Ranaut- the mother of all fathers #babbarsherni pic.twitter.com/Msl2PosqDK
— Kangana Ranaut (@KanganaTeam) January 20, 2021
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.