ಸಿನೆಮಾ ಮಂದಿರಗಳಲ್ಲಿ ಶೇ.50ಕ್ಕಿಂತ ಅಧಿಕ ಆಸನ ಭರ್ತಿಗೆ ಅವಕಾಶ
ಹೊಸದಿಲ್ಲಿ: ಕೊರೋನ ವೈರಸ್ ಹೊಸ ಮಾರ್ಗ ಸೂಚಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದರ ಪ್ರಕಾರ ಚಿತ್ರಮಂದಿರದಲ್ಲಿ ಶೇ.50ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.
ಈ ಕುರಿತು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಎಸ್ ಒಪಿ ಹೊರಡಿಸಿದೆ. ಇದೇ ವೇಳೆ ಈಜುಕೊಳವನ್ನು ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಿ ತೆರೆಯುವಂತೆ ಸೂಚಿಸಲಾಗಿದೆ. ಈ ಕುರಿತು ಯುವ ಕ್ರೀಡಾ ಸಚಿವಾಲಯದ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿತ್ತು. ಈಗ ಈ ನಿಯಮಗಳನ್ನು ಸಡಿಲಿಕೆ ಮಾಡಿ ಸರಕಾರ ಆದೇಶ ನೀಡಿದೆ.
ಈ ಹೊಸ ಮಾರ್ಗಸೂಚಿಗಳನ್ನು ಫೆ.1ರಿಂದ ಫೆ.28ರ ತನಕ ವಿಸ್ತರಿಸಲಾಗಿದೆ.
Next Story